ನಿಂಬಿಯಾ ಬನಾದ ಮ್ಯಾಗಳ

ಜಾನಪದ

ನಿಂಬಿಯಾ ಬನಾದ ಮ್ಯಾಗಳ

ಚಂದ್ರಾಮ ಚಂದಾಡಿದ ||

ಎದ್ದೋನೇ ನಿಮಗ್ಯಾನ ಏಳುತಲಿ ನಿಮಗ್ಯಾನ

ಸಿದ್ದಾರ ಗ್ಯಾನ ಶಿವೂ ಗ್ಯಾನ

ಸಿದ್ದಾರ ಗ್ಯಾನ ಶಿವೂ ಗ್ಯಾನ ಮಾದಶಿವನೆ

ನಿದ್ರೆಗಣ್ಣಾಗೆ ನಿಮಗ್ಯಾನ || ನಿಂಬಿಯಾ ||

ಆರೇಲೆ ಮಾವೀನ ಬೇರಾಗಿ ಇರುವೋಳೆ

ಓಲ್ಗಾದ ಸದ್ದಿಗೆ ಒದಗೋಳೆ

ಓಲ್ಗಾದ ಸದ್ದೀಗೆ ಒದಗೋಳೇ ಸರಸತಿಯೆ

ನಮ್ನಾಲಿಗೆ ತೊಡಿರ ಬಿಡಿಸವ್ವಾ || ನಿಂಬಿಯಾ ||

ಎಂಟೆಲೆ ಮಾವಿನ ದಂಟಾಗಿ ಇರುವೊಳೆ

ಗಂಟೆ ಸದ್ದೀಗೆ ಒದಗೋಳೆ

ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ

ನಮ್ ಗಂಟಾಲ ತೊಡರ ಬಿಡಿಸವ್ವಾ ||| ನಿಂಬಿಯಾ ||

ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ

ರಾಯ ಅಣ್ಣಯ್ನ ಅರಮನೆ

ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ

ನೀ ರಾಜಾ ಬೀದೀಲಿ ದನಿದೋರೆ || ನಿಂಬಿಯಾ ||

ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ

ಜಲ್ಲಾ ಜಲ್ಲಾನೆ ಉದುರವ್

ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ

ಬೆಲ್ಲಾದಾರತಿಯ ಬೆಳಗೇನು || ನಿಂಬಿಯಾ ||

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

2025 ಕನ್ನಡನುಡಿ.ಕಾಂ